1.ವಿಕೋಪ ನಿರ್ವಹಣೆಯು ಸಂಕೀರ್ಣ ವಿಷಯವಾಗಿದ್ದು,ಮಾಹಿತಿ ಮತ್ತು ವರದಿ ವಿನಿಮಯ ತುಂಬಾ ಮುಖ್ಯವಾಗಿರುತ್ತದೆ.
2.ನೈಸರ್ಗಿಕ ವಿಕೋಪಗಳ ಶಮನ ಮಾಡಲು ಸಂಬಂಧಿಸಿದವರಿಗೆ ಮತ್ತು ಸಮುದಾಯದವರಿಗೆ ನಿಜ ಸಮಯದಲ್ಲಿ ಮಾಹಿತಿ ಲಭ್ಯವಾಗುವುದಿಲ್ಲ ಮಾಹಿತಿಯನ್ನು ಕ್ರೋಢಿಕರಿಸಲು ತುಂಬಾ ಸಮಯ ವ್ಯಯವಾಗುವುದನ್ನು ತಪ್ಪಿಸಿ ಕಡಿಮೆ ಸಮಯದಲ್ಲಿ ಮಾಹಿತಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ.
3.ಭಾರತ ಸರ್ಕಾರದ ವಿಪತ್ತು ನಿರ್ವಹಣಾ ಕಾಯಿದೆ 2005 ರ ಅನ್ವಯ ವಿಪತ್ತುಗಳ ನಿರ್ವಹಣಾ ವಿಧಾನ ಮತ್ತು ಮುನ್ನೆಚ್ಚರಿಕೆಗೆ ಹೆಚ್ಚಿನ ವತ್ತು ನೀಡಲಾಗುತ್ತಿದೆ..
4.ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ನೀಡಲು 1 ಡಾಲರ್ ವ್ಯಯಿಸಿದರೆ,ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಲು ತಗಲುವ 7 ಡಾಲರ್ ನಷ್ಟು ಮೊತ್ತವನ್ನು ಉಳಿಸಬಹುದಾಗಿದೆ.ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಹವಾಮಾನ,ಭೂ ವೈಜ್ಞಾನಿಕ,ಜಲಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕ್ರೋಡಿಕರಿಸಿ,ಗಣಕೀಕೃತ ಮಾಡಿ,ವಿಶ್ಲೇಷಿಸಿ,ವರದಿಗಳನ್ನು ಸಿದ್ಧಗೊಳಿಸಿ ಬಳಕೆದಾರರಿಗೆ ಮುನ್ನೆಚ್ಚರಿಕೆ,ಸಲಹೆ ನೀಡಲಾಗುತ್ತಿದೆ.
5.ಇದಕ್ಕೆ ವೇಗವಾದ ಸಹಯೋಗ ಮತ್ತು ಮಧ್ಯಸ್ಥಗಾರರ ನಡುವೆ ನಿಕಟ ಸಹಕಾರ ಅಗತ್ಯವಿರುತ್ತದೆ.
6.ಅನುಷ್ಠಾನಕ್ಕೆ ಅಗತ್ಯವಿರುವ ಮಾಹಿತಿ::
ಈ ಕೆಳಗಿನವುಗಳಿಂದ ನಿಜ ಸಮಯದಲ್ಲಿ ಡೇಟಾ ಸ್ವೀಕರಿಸಲು ಮತ್ತು ವಿಶ್ಲೇಷಿಸಲು,ಬೆಂಗಳೂರಿನಲ್ಲಿ ಕೇಂದ್ರಿಯ ಮುಖ್ಯ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಲಾಗಿದೆ.:
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುಖ್ಯ ನಿಯಂತ್ರಣ ಕೇಂದ್ರವನ್ನು 10 ಎಕರೆಗಳಲ್ಲಿ ಮತ್ತು ಬೆಂಗಳೂರಿನ ಯಲಹಂಕ-ಅಟ್ಟೂರ್ ಲೇಔಟ್ ಬಳಿಯ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿ ಸ್ಥಾಪಿಸಲಾಗಿದೆ.
ಮುಖ್ಯ ನಿಯಂತ್ರಣ ಕೇಂದ್ರವು ದಿನದ 24 ಗಂಟೆ ವಾರದ 7 ದಿನ ಮತ್ತು ವರ್ಷದ 365 ದಿನಗಳು ಕಾರ್ಯ ನಿರ್ವಹಿಸುತ್ತದೆ..
ವರುಣ ಮಿತ್ರ ಸಹಾಯವಾಣಿಯು ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿದ ಮಾಹಿತಿ,ಮುನ್ನೆಚ್ಚರಿಕೆ ಮತ್ತು ಸಲಹೆಗಳನ್ನು ಒದಗಿಸುತ್ತಿದೆ.