ಕರ್ನಾಟಕ ರಾಜ್ಯದಲ್ಲಿ ಬರ ಅಧ್ಯಯನ ಕೈಗೊಳ್ಳಲು 1988 ರಲ್ಲಿ ಪ್ರಪ್ರಥಮವಾಗಿ ಬರ ಪರಿಹಾರ ಉಸ್ತುವಾರಿ ಕೋಷವನ್ನು ಸ್ಥಾಪಿಸಲಾಯಿತು.
ಬರ ಪರಿಹಾರ ಉಸ್ತುವಾರಿ ಕೋಷವನ್ನು ಬಲ ಪಡಿಸಿ ಇತರೆ ನೈಸರ್ಗಿಕ ವಿಕೋಪಗಳ ಅಧ್ಯಯನ ಕೈಗೊಳ್ಳಲು 2007 ರಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆ. ಎಸ್. ಎನ್. ಡಿ. ಎಮ್. ಸಿ) ಎಂದು ಮರುನಾಮಕರಣ ಮಾಡಲಾಯಿತು.
ಕಾರ್ಯಕಾರಿಣಿ ಸಮೀತಿಗೆ ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಇವರು ಅಧ್ಯಕ್ಷರಾಗಿರುತ್ತಾರೆ. ಪ್ರಧಾನ ಕಾರ್ಯದರ್ಶಿಗಳು ಮಾ.ತಂ, ಜೈ.ತಂ ಹಾಗೊ ವಿಜ್ಙಾನ ಮತ್ತು ತಂತ್ರಜ್ಙಾನ ಇಲಾಖೆ,
ಸಂಭಂಧಿಸಿದ ಇತರೆ ಇಲಾಖೆಗಳ ಸದಸ್ಯರು ಮತ್ತು ವೈಜ್ಙಾನಿಕ ಸಂಸ್ಥೆಗಳು ಸದಸ್ಯರಾಗಿರುತ್ತಾರೆ.
ಅಪರ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರಕಾರ ಹಾಗೊ ಅಭಿವೃದ್ಧಿ ಆಯುಕ್ತರು, ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆ ವಿಪತ್ತು ನಿರ್ವಹಣೆ, ಪ್ರಧಾನ ಕಾರ್ಯದರ್ಶಿಗಳು ಮಾ.ತಂ, ಜೈ.ತಂ ಹಾಗೊ ವಿಜ್ಙಾನ ಮತ್ತು ತಂತ್ರಜ್ಙಾನ ಇಲಾಖೆ,
ಸಂಭಂಧಿಸಿದ ಇತರೆ ಇಲಾಖೆಗಳ ಸದಸ್ಯರು ಮತ್ತು ವೈಜ್ಙಾನಿಕ ಸಂಸ್ಥೆಗಳು ಸದಸ್ಯರಾಗಿರುತ್ತಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು, ೧೦ ಎಕರೆ ವಿಶಾಲವಾದ ಪ್ರದೇಶದಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ ,ಅಟ್ಟೂರ್ ಲೇಔಟ್ ,ಯಲಹಂಕ, ಬೆಂಗಳೂರಿನಲ್ಲಿ ಸ್ಥಾಪಿತವಾಗಿದೆ.
ಸಂಸ್ಥೆಯು ದಿನದ ಎಲ್ಲ ೨೪ ಗಂಟೆಗಳು ವಾರದ ೭ ದಿನಗಳು ಹಾಗೂ ವರ್ಷದ ೩೬೫ ದಿನಗಳಲ್ಲೂ ಕಾರ್ಯ ನಿರ್ವಹಿಸುತ್ತದೆ.